Gadinnada Jaanapada Samparka Adyayana Kendra, Sira
Email: yennekatte@gadinadajaanapada.com
ನನ್ನ ಹೆಸರು ಡಾ. ಚಿಕ್ಕಣ್ಣ ಎಂದು, ನನ್ನೂರು ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಯಣ್ಣೆಕಟ್ಟೆ ಎಂಬ ಪುಟ್ಟ ಗ್ರಾಮ. ಬಹುತೇಕ ಬುಡಕಟ್ಟು ಜನಾಂಗದವರೇ ಇಲ್ಲಿನ ನಿವಾಸಿಗಳು. ನಾನು ಹಟ್ಟಿದ್ದು 24ನೇ ಮೇ, 1963 ಅಂದು ಮಂಗಳವಾರವಾಗಿತ್ತು.
ಪ್ರಾಥಮಿಕ ವಿದ್ಯಾಭ್ಯಾಸವನ್ನು ನನ್ನೂರು ಯಣ್ಣೆಕಟ್ಟೆಯಲ್ಲಿ ಮುಗಿಸಿ, ಮಾಧ್ಯಮಿಕ ಹಾಗೂ ಪ್ರೌಢಶಾಲೆಯನ್ನ ಸಮೀಪದ ಚೇಳೂರು ಗ್ರಾಮದಲ್ಲಿ ಮಾಡಲಾಯಿತು. ಮುಂದೆ ಪಿಯುಸಿ ತರಗತಿಯನ್ನು ಕಲಾ ವಿಷಯದೊಂದಿಗೆ ಸರಕಾರೀ ಪದವಿಪೂರ್ವ ಕಾಲೇಜು ಕುಣಿಗಲ್ನಲ್ಲಿ ಬಿಎ ತರಗತಿಯನ್ನು ಐಚ್ಛಿಕ ಕನ್ನಡದೊಂದಿಗೆ ಕಲ್ಪತರು ಕಾಲೇಜು, ತಿಪಟೂರು ಇಲ್ಲಿ ಮಾಡಲಾಯಿತು. ಜಾನಪದ ಐಚ್ಛಿಕ ವಿಷಯದೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು 1987 ರಲ್ಲಿ ಪೂರೈಸಿ, 1988 ರಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಾಳ್ವಭಾರತ ಒಂದು ಸಾಂಸ್ಕೃತಿಕ ಅಧ್ಯಯನ ವಿಷಯ ಕುರಿತ ಪಿಎಚ್ಡಿ ಸಂಶೋಧನೆ ಕೈಗೊಂಡು 1994 ರಲ್ಲಿ ಪಿಎಚ್ಡಿ ಪಡೆಯಲಾಯಿತು. ಡಾ. ಕಮಲ ಹಂಪನಾ ನನಗೆ ಮಾರ್ಗದರ್ಶಕರು.
1988 ರಿಂದ 1996 ರವರೆಗೆ ಬೆಂಗಳೂರಿನ ರಾಜಾಜಿನಗರದ ಎಸ್ಜೆಆರ್ ಮಹಿಳಾ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಮತ್ತು ವಿಭಾಗದ ಮುಖ್ಯಸ್ಥರಾಗಿ ನೇಮಕವಾದೆನು. ಈ ಅವಧಿಯಲ್ಲಿ ಪಿಎಚ್ಡಿಯ ಕಾರ್ಯ ಮುಂದುವರೆಯಿತು. 14 ವಿದ್ಯಾರ್ಥಿಗಳಿಂದ ಆರಂಭಿಸಲಾದ ಎಸ್ಜೆಆರ್ ಕಾಲೇಜು 1996ರಲ್ಲಿ 2480 ವಿದ್ಯಾರ್ಥಿಗಳು ಪ್ರವೇಶ ಪಡೆದದ್ದು ಈ ಕಾಲೇಜು ತೋರಿದ ಪ್ರಗತಿ, ಬೆಳೆದ ರೀತಿ, ನಮ್ಮನ್ನೂ ಬೆಳಸಿದ ಬಗೆ, ನನಗೆ ನಾನೇ ಹೆಮ್ಮೆ ಪಡುತ್ತೇನೆ. ಈ ಅವಧಿಯಲ್ಲಿ 310 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಈ ಕಾಲೇಜಿನಿಂದ ಹೊರ ಹೊಮ್ಮಿದರು ಎಂಬುದು ಹೆಮ್ಮೆಯ ಸಂಗತಿ.
1994 ರಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯ ನನಗೆ ಡಾಕ್ಟರೇಟ್ ನೀಡಿತು. ಈ ವೇಳೆಗೆ 6 ವರ್ಷಗಳ ಪದವಿ ತರಗತಿಯ ಬೋಧನಾನುಭವ ಹಾಗೂ ಹತ್ತು ಪುಸ್ತಕಗಳ ಪ್ರಕಟಣಾ ಅನುಭವ ಇದ್ದದ್ದರಿಂದ ಬೆಂಗಳೂರು ವಿಶ್ವವಿದ್ಯಾನಿಲಯ 1996 ರಿಂದ ಕನ್ನಡ ಅಧ್ಯಯನ ಕೇಂದ್ರದ ಮೂಲಕ ಪಿಎಚ್ಡಿ ಮಾಡುವ ವಿದ್ಯಾರ್ಥಿಗಳಿಗೆ ನನ್ನನ್ನ ಮಾರ್ಗದರ್ಶಕರೆಂದು ಪರಿಗಣಿಸಿತು. ನನ್ನ ಮಾರ್ಗ ದರ್ಶನದಲ್ಲಿ 1996 ರಿಂದ 2012ರವೆಗೆ 19 ವಿದ್ಯಾರ್ಥಿಗಳು ನೊಂದಾಯಿತರಾದರೂ 2011 ವರೆಗೆ 5 ಜನ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರು. ಜೊತೆಗೆ ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾನಿಲಯದ ಮೂಲಕ 4 ಜನ ವಿದ್ಯಾರ್ಥಿಗಳು ಎಂಫಿಲ್ ಪದವಿಯನ್ನು ನನ್ನ ಮಾರ್ಗದರ್ಶನದಲ್ಲಿ ಪಡೆದರು.
ಆಗಸ್ಟ್ 1, 1996 ರಲ್ಲಿ ಕರ್ನಾಟಕ ಸರಕಾರ - ಲೋಕಸೇವಾ ಆಯೋಗದ ಮೂಲಕ ಸರಕಾರಿ ಪ್ರ.ದ.ಕಾಲೇಜು ಸಿರಾ ಇಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ನಮೇಕ ಮಾಡಿತು. ಇದೇ ಅವಧಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮೂಲಕ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮಾರ್ಗದರ್ಶಕರಾಗಿ ಮುಂದುವರಿದೆ. ಈ ಅವಧಿಯಲ್ಲಿ 1999 ರಿಂದ 2010 ರವೆಗೆ 12 ವರ್ಷಗಳ ಕಾಲ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಯಾಗಿ ಗ್ರಾಮೀಣ ಹಂತದಲ್ಲಿ 10 ವಿಶೇಷ ಶಿಬಿರಗಳು ಸೇರಿದಂತೆ ಒಟ್ಟು 89 ಕಾರ್ಯಕ್ರಮಗಳನ್ನು ಗ್ರಾಮೀಣ, ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಮಹಿಳಾ ಸಬಲೀಕರಣ, ಪರಿಸರ ಜಾಗೃತಿ, ಅಧಿಕಾರಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ ಹೆಮ್ಮೆ ನನ್ನದು. ಈ ಸಂದರ್ಭದಲ್ಲಿ ಹಲವು ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಲ್ಲೂ ಪಾಲ್ಗೊಂಡದ್ದು ನನಗೆ ಹರ್ಷ ತಂದಿದೆ.
ಡಾ. ಚಿಕ್ಕಣ್ಣ ಯಣ್ಣೆಕಟ್ಟೆ
ಕನ್ನಡ ಸಹ ಪ್ರಾಧ್ಯಾಪಕ, ಪಿಎಚ್ಡಿ ಮಾರ್ಗದರ್ಶಕ
Home | About Us | Frontier Folk | Book World | Junjappa Comprehensive Myth | Gallery | Broadcast - Show | Media Information | Honor - Reception | Our Team
Copyright © 2015 gadinadajaanapada.com all rights reserved
Designed & Developed by Digissofts Technologies