Gadinnada Jaanapada Samparka Adyayana Kendra, Sira
Email: yennekatte@gadinadajaanapada.com
ಸಿರ್ಯಾ ಸೀಮೆ ಜನಪದ ಕಲೆ-ಸಾಯಿತ್ಯ ಸಂಸ್ಕೃತಿಯ ಸಮೃದ್ದ ನೆಲೆ. ಇಲ್ಲಿನ ಬುಡಕಟ್ಟು ಜನಾಂಗಗಳಾದ ಕಾಡುಗೊಲ್ಲರು, ಕುರುಬರು, ಕುಂಚಿಟಿಗರು, ಬೇಡರು ಪಾರಂಪಾರಿಕವಾಗಿ ರೂಡಿಸಿ-ಬೆಳೆಸಿಕೊಂಡು ಬಂದ ಹಾಡು, ಕಾವ್ಯ, ಕುಣಿತ, ಯಕ್ಷಗಾನ, ಬಯಲಾಟ ಈ ಭಾಗದಲ್ಲಿ ವೈವಿದ್ಯಮಯವಾಗಿ ಮೈತಾಳುತ್ತಿವೆ. ಆರೆಳು ರಾತ್ರಿಗಳ ಕಾಲ ನಿರಂತರವಾಗಿ ಹಾಡಬಲ್ಲ ಅಪೂರ್ವಜನಪದಕಾವ್ಯಖಂಡಕಾವ್ಯ, ಬಿಡಿಗೀತೆಕಾವ್ಯ, ಪ್ರಕಾರಗಳು ಸಿರಾ ಸೀಮೆಯ ವಿಶೇಷ. ಆನಪದ ಮಹಾಕಾವ್ಯ ವೀರಜುಂಜಪ್ಪನಂಥಅಪೂರ್ವ ಸಾಂಸ್ಕೃತಿಕ ನಾಯಕನ ನೆಲೆ ಇದೇ ಸಿರಾ ತಾಲ್ಲೂಕಿನ ಕಳುವರಹಳ್ಳಿಯಲ್ಲಿ ಇದು ಹತ್ತಾರು ಪಿ.ಹೆಚ್.ಡಿ ಸಂಶೋಧನೆಗೂ ವಸ್ತುವಾಗಿರುವುದು ವಿಶೇಷ. ಆನಪದ ಕಲೆ, ಕಲಾವಿದರೊಂದಿಗೆ ಬೆರೆಯುವ, ಪ್ರಚಾರ, ಪ್ರಸಾರಕ್ಕೆ ಅನುವು ಮಾಡುವ ಈ ಮೂಲಕ ಸಂಸ್ಕೃತಿಅಧ್ಯಯನಕ್ಕೆ ಸಹಕಾರಿಯಾಗಬಲ್ಲ ಆಶಯವೇಗಡಿನಾಡಜನಪದ ಸಂಪರ್ಕಾದ್ಯಾಯನಕೇಂದ್ರದರಚನೆ. ಈ ಜಾನಪದ ಸಂಸ್ಥೆ ಕರ್ನಾಟಕ ಹಾಗೂ ಹೊರಗೂ ಕಳೆದ ಹದಿನೆಂಟು ವರ್ಷಗಳಿಂದ (20ನೇ ಆಗಸ್ಟ್ 1998) ಜನಪದ ಕಲಾಮೇಳ, ಪುಸ್ತಕ ಪ್ರಕಟಣೆ, ಕಲಾವಿದರಿಗೆಗೌರವ ಪುರಸ್ಕಾರಗಳ ಜೊತೆಗೆಅರ್ಹಕಲಾವಿದೆರಿಗೆ ಸರ್ಕಾರದ ವತಿಯಿಂದ ಮಾಶಾಸನ ಪಡೆಯಲು ಸಹಕರಿಸುತ್ತಾ ಬರುತ್ತಿದೆ. ಗಣೆ, ಗೊರವರಕುಣಿತ, ಸೋಮನಕುಣಿತ, ವೀರಗಾಸೆ, ಚಿಟ್ಟು ಮೇಳ, ಯಕ್ಷಗಾನ, ಕೋಲುಮೇಳ, ಮೂಡಲ ಮಣೇವುಕುಣಿತ, ಸೋಬಾನೆಈ ಬಗೆಯಕಲಾವಿದರನ್ನು ಸರ್ಕಾರದ ಸಾಂಸ್ಕೃತಿಕ ವಿನಿಮಯ ಯೋಜನೆಗಳ ಅಡಿಯಲ್ಲಿ ಹೊರರಾಜ್ಯಗಳಿಗೂ ಕರೆದೊಯ್ದು ಕರ್ನಾಟಕ ಕಲಾ ವೈಶಿಷ್ಟ್ಯತೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಬಿಂಭಿಸಿದೆ. ದೆಹಲಿ, ಬಾಂಬೆ, ತಂಜಾವೂರು, ಹೈದರಾಬಾದ್, ಉತ್ತರಪ್ರದೇಶ, ಮಧುರಾ, ಅಕ್ರಾ, ಪೆನ್ನೆ, ಕೇರಳ ಮುಂತಾದ ಹೊರರಾಜ್ಯಗಳಲ್ಲಿ ಕರ್ನಾಟಕ ಕಲಾ ಸಂಸ್ಕೃತಿಯನ್ನು ಪ್ರಸರಿಸಿದ ಹಿರಿಮೆಯೂ ಈ ಕೇಂದ್ರಕ್ಕಿದೆ. ಸಂಶೋಧನೆಗೆಅಕರವಾಗಿರುವ 54 ಪುಸ್ತಕಗಳನ್ನು ಈ ಕೇಂದ್ರ ಪ್ರಕಟಿಸಿದೆ. ಇದರ ಪ್ರಕಟಣೆಗಳಿಗೆ ಕನಾಟಕಜಾನಪದಅಕಾಡೆಮಿ ಪ್ರಶಸ್ತಿ ಪುರಸ್ಕಾರಗಳೂ ದೊರೆತಿರುವುದು ಈ ಕೇಂದ್ರದ ಪುಸ್ತಕಗಳ ಸಾರ-ಸತ್ವವನ್ನು ಸಾದರ ಪಡಿಸುತ್ತದೆ. 150ಕ್ಕೂ ಹೆಚ್ಚು ಜನಪದಕಲಾವಿದರಿಗೆ ಮಾಶಾಸನದ ಸೌಲಭ್ಯದೊರೆಯಲು ಮಾರ್ಗದರ್ಶನ ಮಾಡಿದೆ. ಈ ಎಲ್ಲಾ ಕೆಲಸಗಳನ್ನು ವಿಸ್ತರಿಸುವ ಸಾರ್ವಜನಿಕರ ಗಮನಕ್ಕೆ ತರುವ ವಿದ್ಯಾಥರ್ಿಗಳಿಗೆ ಅಕರವಾಗಬಲ್ಲ ಪುಸ್ತಕ ಪರಿಚಯಿಸುವಉದ್ದೇಶದಿಂದ ಈಗ ಅಂತರ್ಜಾಲದ ವ್ಯಾಪ್ತಿಗೆ ಬರುತ್ತಿದ್ದೇವೆ. ಈ ಮೂಲಕ ನಮ್ಮಲ್ಲಿ ಪ್ರಕಟಣೆಗಳನ್ನು ಜಗತ್ತಿನಾದ್ಯಂತಆಸಕ್ತರು ಗಮನಿಸುವ, ವ್ಯಾಖ್ಯಾನಿಸುವ ಸಂವಾದಕ್ಕೆಅಸ್ಪದಕಲ್ಪಿತವಾಗುತ್ತಿದೆ. ವಿದ್ಯುನ್ ಮಾಧ್ಯಮದ ಮೂಲಕ ಸಮುದಾಯಕ್ಕೆ ನಾವಿನ್ನು ಹತ್ತಿರವಾಗುತ್ತಿದ್ದೇವೆ. ನಮ್ಮ ಸಂಸ್ಥೆಗೆ ಆಧಾರದ ಸ್ವಾಗತ.
1988 ರಿಂದ 1996 ರವರೆಗೆ ಬೆಂಗಳೂರಿನ ರಾಜಾಜಿನಗರದ ಎಸ್ಜೆಆರ್ ಮಹಿಳಾ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಮತ್ತು ವಿಭಾಗದ ಮುಖ್ಯಸ್ಥರಾಗಿ ನೇಮಕವಾದೆನು. ಈ ಅವಧಿಯಲ್ಲಿ ಪಿಎಚ್ಡಿಯ ಕಾರ್ಯ ಮುಂದುವರೆಯಿತು. 14 ವಿದ್ಯಾರ್ಥಿಗಳಿಂದ ಆರಂಭಿಸಲಾದ ಎಸ್ಜೆಆರ್ ಕಾಲೇಜು 1996ರಲ್ಲಿ 2480 ವಿದ್ಯಾರ್ಥಿಗಳು ಪ್ರವೇಶ ಪಡೆದದ್ದು ಈ ಕಾಲೇಜು ತೋರಿದ ಪ್ರಗತಿ, ಬೆಳೆದ ರೀತಿ, ನಮ್ಮನ್ನೂ ಬೆಳಸಿದ ಬಗೆ, ನನಗೆ ನಾನೇ ಹೆಮ್ಮೆ ಪಡುತ್ತೇನೆ. ಈ ಅವಧಿಯಲ್ಲಿ 310 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಈ ಕಾಲೇಜಿನಿಂದ ಹೊರ ಹೊಮ್ಮಿದರು ಎಂಬುದು ಹೆಮ್ಮೆಯ ಸಂಗತಿ. | ಮುಂದುವರಿಸು →
Home | About Us | Frontier Folk | Book World | Junjappa Comprehensive Myth | Gallery | Broadcast - Show | Media Information | Honor - Reception | Our Team
Copyright © 2015 gadinadajaanapada.com all rights reserved
Designed & Developed by Digissofts Technologies