Gadinnada Jaanapada Samparka Adyayana Kendra, Sira

📧 Email: yennekatte@gadinadajaanapada.com

ಗಡಿನಾಡ ಜಾನಪದ ಸಂಪರ್ಕ ಅಧ್ಯಯನ ಕೇಂದ್ರ, ಸಿರಾ

ಕಲಾ ನೋಟ

ಮಾಧ್ಯಮ ಮಾಹಿತಿ

ಮುಂದುವರಿಸು ➙

ನಡೆದು ಬಂದ ದಾರಿ

ಜಾನಪದ ಇಂದು ಎಲ್ಲರ ಕುತೂಹಲದ ಕ್ಷೇತ್ರ ಒಟ್ಟು ಮನುಕುಲದ ಜೀವನಾಡಿಯಾಗಿ ಅನುಭವಾಮೃತದ ಬುತ್ತಿಯಾಗಿ, ಹಾಡಾಗಿ, ಕತೆಯಾಗಿ, ಒಗಟು ಗಾದೆಗಳಾಗಿ ಕುಣಿತ ಕಲಾ ಪ್ರಕಾರವಾಗಿ ಪಂಡಿತ ಪಾಮರೆರೆಲ್ಲರ ಆಸಕ್ತಿಯ ವಸ್ತುವಾಗಿದೆ, ಜಾನಪದವೆಂದರೆ ಇಡೀ ಮಾನವ ಸಂಸ್ಕೃತಿಯ ಅಧ್ಯಯನ ಎಂಬ ವಿಶಾಲಾರ್ಥ ಪ್ರಾಪ್ತವಾಗಿದೆ.
ಜನಪದ ಕೆಲ, ಕಲಾವಿದರೊಂದಿಗೆ ಬೆರೆಯುವ, ಪ್ರಚಾರ, ಪ್ರದರ್ಶನಕ್ಕೆ ಅನುವು ಮಾಡುವ, ಈ ಮೂಲಕ ಜಾನಪದ ಅಧ್ಯಯನ, ಸಂಶೋಧನೆಗೆ ಸಹಕಾರಿಯಾಗಬಲ್ಲ ಆಶಯದ ಸಂಸ್ಥೆ, ಗಡಿನಾಡ ಜಾನಪದ ಸಂಪರ್ಕಾಭಿವೃದ್ದಿ ಕೇಂದ್ರ ಪ್ರತಿಷ್ಠಾನ 20ನೇ ಆಗಸ್ಟ್ 1998 ರಂದು ಈ ಸಂಸ್ಥೆಯನ್ನು, ಜನಪದ ಮಹಾಕಾವ್ಯ ಹಾಡುಗಾರ ಲಕ್ಕವ್ವನಹಳ್ಳಿ ಗೊಲ್ಲರಹಟ್ಟಿ ನಿಂಗಜ್ಜ ಉದ್ಟಾಟಿಸಿದರು. ಚಲನಚಿತ್ರ ಕಲಾವಿದ ಶ್ರೀ ಕರಿಬಸವಯ್ಯ ಜನಪದ ಕಲಾವೇಳಕ್ಕೆ ಚಾಲನೆ ನೀಡಿದರು. ಕರ್ನಾಟಕಾಂದ್ರ ಗಡಿನೆಲ ದ್ವಾರನಕುಂಟೆಯಲ್ಲಿ ಒಂದು ನೂರಕ್ಕೂ ಹೆಚ್ಚು ಕಲಾವಿದರು ಗಡಿಭಾಗದ ವೈವಿಧ್ಯಮಯ ಕಲಾ ಪ್ರಕಾರಗಳು ಪ್ರದರ್ಶನ ನೀಡಿದರು. ಅಲ್ಲಿಂದ ಇಲ್ಲಿಯತನಕ ಈ ಸಂಸ್ಥೆ ಒಂದು ಸಾವಿರಕ್ಕೂ ಹೆಚ್ಚು ಕಲಾಮೇಳಗಳನ್ನು ಸಂಘಟಿಸಿದೆ.1999 ರಲ್ಲಿ ಪ್ರಪ್ರಥಮ ಗಡಿನಾಡ ಜಾನಪದ ಕಲಾಮೇಳವನ್ನು ಅಂದಿನ ಕರ್ನಾಟಕ ಕಾರ್ಮಿಕ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸತ್ಯನಾರಾಯಣ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಸಲಾಯಿತು. 16-02-2-1999 ರಂದು ಅಂದಿನ ಕನರ್ಾಟಕ ಸಕರ್ಾರದ ಉಪಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಗಡಿನಾಡ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿದರು, ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದ ಈ ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಶಾಸಕ ಟಿ.ಬಿ.ಜಯಚಂದ್ರ ಸೇರಿದಂತೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ//ಕಾಳೇಗೌಡ ನಾಗವಾರ, ಐ.ಎಂ.ವಿಠಲ ಮೂರ್ತಿ, ಡಾ// ಎಜಾಸುದ್ದೀನ್, ಚಲನಚಿತ್ರ ಕಲಾವಿದರಾ ಪ್ರಮೀಳಾ ಜೋಷಾಯ್, ಶ್ರೀ ಸುಂದರರಾಜ್, ಡಾ// ಜಿ.ಪರಮೇಶ್ವರ ಮೊದಲಾದ ಗಣ್ಯರು ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಜಾನಪದ ಸಂಗೀತ ಸಂಜೆ, ಜಾನಪದ ಕಲಾ ಪ್ರದರ್ಶನ, ಗಡಿನಾಡ ಜಾನಪದ ಸಾಹಿತ್ಯ ಸಮೀಕ್ಷೆ, ಗಡಿನಾಡಿ ಜಾನಪದ ಸಂಗೀತೋತ್ಸವ, ಗಡಿನಾಡ ಕಲಾವಿದರ ಗೌರವಾರ್ಪಣೆ ಮೊದಲಾದ ಕಲಾ ಕಾರ್ಯಕ್ರಮದಲ್ಲಿ 1800 ಕಲಾವಿದರು ರಾಜ್ಯದ ನಾನಾ ಭಾಗಗಳಿಂದ ಭಾಗವಹಿಸಿದ್ದರು, ಅಂದಿನ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಎಂ.ಪಿ.ಪ್ರಕಾಶ್ ಸಮಾರೋಪ ಭಾಷಣ ಮಾಡಿದ ಈ ಸಭೆಯಲ್ಲಿ ಕನರ್ಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ// ಎಚ್.ಕೆ.ಲಕ್ಕಪ್ಪಗೌಡ, ದಲಿತ ಕವಿ ಡಾ// ಸಿದ್ದಲಿಂಗಯ್ಯ, ಚಲನಚಿತ್ರ ನಿದರ್ೇಶಕ ತರೂರು ಸಿದ್ದಲಿಂಗಯ್ಯ, ಚಿಂತಕ ಜಾಣಗೆರೆ ವೆಂಕಟರಾಮಯ್ಯ, ಚಲನಚಿತ್ರ ಕಲಾವಿದರಾದ ಶ್ರೀ ಕರಿಬಸವಯ್ಯ ವಾಣಿ ಶ್ರೀ ಭಾಗವಹಿಸಿದ್ದರು, ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಗಡಿನಾಡ ಜಾನಪದ ಸಂಪಕರ್ಾಧ್ಯಯನ ಕೇಂದ್ರ ಪ್ರತಿಷ್ಠಾನ ಕಳೆದ ಹತ್ತು ವರ್ಷಗಳಿಂದ ಗಡಿಭಾಗದ ಕಲಾವಿದರಿಗೆ ಒತ್ತಾಸೆಯಾಗಿ ಬೆಳೆದಿದೆ. ಹಲವು ಕಲಾಮೇಳಗಳ ಮೂಲಕ, ಕಲಾವಿದರ ಅದಮ್ಯ ಉತ್ಸಾಹವನ್ನು, ಕಲಾ ಹಿರಿಮೆಯನ್ನು ಗುರುತಿಸಿದೆ. ತೆರೆಯ ಮರೆಯ ಕಲಾವಿದರಿಗೆ ಪ್ರದರ್ಶನೆ, ಪ್ರಸಾರಕ್ಕೆ ಆಸ್ಪದ ನೀಡಿದೆ. ಕನರ್ಾಟಕ ಸಕರ್ಾರದ ಸಾಂಸ್ಕ್ರತಿಕ ವಿನಿಮಯ ಮೊದಲಾದ ಯೋಜನೆಗಳಲ್ಲಿ ಬಾಂಬೆ, ಹೆಹಲಿ, ಹೈದರಾಬಾದ್ ಮುಂತಾದ ಹೊರ ರಾಜ್ಯಗಳಲ್ಲೂ ಕಲಾಪ್ರದರ್ಶನಕ್ಕೆ ಅವಕಾಶ ಒದಗಿಸಿದೆ. ಅರ್ಹ, ಹಿರಿಯ ಕಲಾವಿದರಿಗೆ ಮಾಸಾಶನದಂತಹ ಮಹತ್ವದ ಯೋಜನೆಗೆ ಒಳಪಡಿಸಿದೆ. ಆಕಾಶವಾಣಿ, ದೂರದರ್ಶನಗಳ ಮೂಲಕವೂ ಕಲಾ ಪ್ರದರ್ಶನಕ್ಕೆ ಅವಕಾಶ ಒದಗಿಸಿದೆ.ಈ ಬಗೆಯ ಅಪೂರ್ವ ಕಲಾವಿದರು ಈ ಭಾಗದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ.

Home | About Us | Frontier Folk | Book World | Junjappa Comprehensive Myth | Gallery | Broadcast - Show | Media Information | Honor - Reception | Our Team

Copyright © 2015 gadinadajaanapada.com all rights reserved
Designed & Developed by Digissofts Technologies

gadinada jaanapadagadinada jaanapadagadinada jaanapadagadinada jaanapada