Gadinnada Jaanapada Samparka Adyayana Kendra, Sira
Email: yennekatte@gadinadajaanapada.com
ಸಿರಾ, ಬಿಸಿಲು, ಬರ ಹೊತ್ತುಕೊಂಡ ಹಿಂದುಳಿದ ಹಾಗೂ ಗಡಿನಾಡು ಪ್ರದೇಶ. ಇಲ್ಲಿ ಬಿಸಿಲು ಹೆಚ್ಚು, ಸೌಜನ್ಯವೂ ಹೆಚ್ಚು. ಬುಡಕಟ್ಟು ಸಂಸ್ಕೃತಿಯ ಅಪ್ಪಟ ಜನಪದ ಹಾಡು, ಕಾವ್ಯ, ಮಹಾಕಾವ್ಯ, ಕಥೆ, ಚರಿತ್ರೆ ಇವುಗಳಿಗೆ ಇಲ್ಲಿ ಎಲ್ಲಿಲ್ಲದ ಗೌರವ. ಬಹುತೇಕ ಕಾಡುಗೊಲ್ಲರ ಹಟ್ಟಿಗಳು, ಬೇಡರ ಊರು, ಕುಂಚಿಟಿಗರ ಮನೆಗಳು, ಕುರುಬರ ಕೇರಿ ಇಲ್ಲೆಲ್ಲಾ ಊರಿಗೆಲ್ಲಾ ಒಬ್ಬೊಬ್ಬರಂತಾದರೂ ಜನಪದ ಹಾಡುಗಾರರು, ಕಥನಕಾರರು ಲಭ್ಯವಿದ್ದಾರೆ. ಇದೇ ಸಿರಾ ಸೀಮೆಯ ವಿಶೇಷ. ಸಿರಾ ಪಾಳೇಗಾರರ ಸಂಸ್ಕೃತಿಯನ್ನು ಜನಪದ ವಾಗ್ಞಮಯದಲ್ಲಿ ಕಟ್ಟಿಕೊಟ್ಟ ಸಿರಾದ ಮೊರುಬಾಗಿಲು. ಸೋಬಾನೆ ಈರಣ್ಣ, ಲಕ್ಕವ್ವನಹಳ್ಳಿ ಗೊಲ್ಲರಹಟ್ಟಿ, ನಿಂಗಜ್ಜ, ಮಾಗೋಡು ಗೊಲ್ಲರಹಟ್ಟಿ ದಾಸಣ್ಣ, ಮದಲೂರು ದಾಸರಹಳ್ಳಿ ದಳವಾಯಿ ದಾಸಪ್ಪ ಈ ಬಗೆಯ ಅಪೂರ್ವ ಜನಪದ ಕಲಾವಿದರು ನನ್ನ ಜಾನಪದ ಸಿರಿ ಬದುಕಿಗೆ ನೀರೆರೆದು ಪೋಷಿಸಿದ ಮಾತ್ರವಲ್ಲ ನನ್ನನ್ನ ಎಲ್ಲರೂ ಗುರುತಿಸುವಂತೆ ಮಾಡಿದ ಜಾನಪದ ಸಂಪನ್ನರು. ಇವರು ಹಾಡಿದ ಬಹುತೇಕ ಹಾಡುಗಳನ್ನ ನಾನು ಹಲವಾರು ರಾತ್ರಿಗಳ ಕಾಲ ವರ್ಷಗಳ ಕಾಲ, ಕಾಡುಗೊಲ್ಲರ ಹಟ್ಟಿಗಳಲ್ಲಿ ಕುಂತು ಮಣೆಗಾರರ ಪಡಸಾಲೆಯಲ್ಲಿ ತಂಗಿ ಸಂಗ್ರಹಿಸಲಾಯಿತು. ಮಾತ್ರವಲ್ಲ ಈ ಎಲ್ಲಾ ಪುಸ್ತಕಗಳು ಸಿರಾ ಸೀಮೆಯ ಇತಿಹಾಸ ಮತ್ತು ಸಂಸ್ಕೃತಿ ಚಿತ್ರದೇವರ ಕಾವ್ಯ, ಕಾಟಂ ಲಿಂಗನ ಕಾವ್ಯ, ಮಾಗೋಡು ಕಂಬದ ರಂಗನ ಕಾವ್ಯ ಬಂಡಿ ಬಂದಾವೂ ಬಾಳೆ ವನದಾಗೆ ಈ ಮೊದಲಾದ ಸಂಗ್ರಹಗಳಲ್ಲಿ ಪ್ರಕಟಿಸಲಾಯಿತು.
ಜನಪದ ಕಲೆ, ಪ್ರಸಾರ, ಪ್ರಕಟಣೆ, ಕಲಾವಿದರ ಪ್ರದರ್ಶನ, ಪ್ರೋತ್ಸಾಹದ ಹಿನ್ನೆಲೆಯಲ್ಲಿ 1988 ರಲ್ಲಿ ಸಿರಾ ನಗರದಲ್ಲಿ ಗಡಿನಾಡ ಜಾನಪದ ಸಂಪರ್ಕ ಅಧ್ಯಯನ ಕೇಂದ್ರ ಎಂಬ ಜಾನಪದ ಸಂಸ್ಥೆಯೊಂದನ್ನು ಸ್ಥಾಪಿಸಲಾಯಿತು. ಹಿರಿಯ ಕಲಾವಿದ, ಜನಪದ ಮಹಾಕಾವ್ಯ ಹಾಡುಗಾರ ಲಕ್ಕವ್ವನಹಳ್ಳಿ ಗೊಲ್ಲರಹಟ್ಟಿ ನಿಂಗಜ್ಜ ಗಡಿನೆಲ ದ್ವಾರನಕುಂಟೆಯಲ್ಲಿ ಆಯೋಜಿಸಿದ್ದ ಗಡಿನಾಡ ಜಾನಪದ ಕೇಂದ್ರದ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಕರ್ನಾಟಕ ಹೆಸರಾಂತ ಚಲನಚಿತ್ರ ಕಲಾವಿದ ಕರಿಬಸವಯ್ಯ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂದು ದೊಡ್ಡಬಾಣಗೆರೆ ಮಾರಣ್ಣ, ಭೂವನಹಳ್ಳಿ ನಾಗರಾಜು ಸೇರಿದಂತೆ ಹಲವಾರು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾಹಿತ್ಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
1988 ರಲ್ಲಿ ಆರಂಭವಾದ ಗಡಿನಾಡ ಜಾನಪದ ಕೇಂದ್ರ ಅಂದಿನ ಕರ್ನಾಟಕ ಸರಕಾರ ಕಾರ್ಮಿಕ ಮತ್ತು ಸಣ್ಣ ಉಳಿತಾಯ ಖಾತೆ ರಾಜ್ಯ ಸಚಿವರಾಗಿದ್ದ ಬಿ.ಸತ್ಯನಾರಾಯಣ ಅವರ ಅನನ್ಯ ಸಹಕಾರ ಅಂದು ಸಿರಾ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಅಧಿಕಾರಿಯಾಗಿದ್ದ ಶ್ರೀ ಭುವನಹಳ್ಳಿ ನಾಗರಾಜು ಇವರ ಅಪೂರ್ವ ಸಂಘಟನೆಯಿಂದ ಪ್ರಪ್ರಥಮ ಅಖಿಲ ಕರ್ನಾಟಕ ಪ್ರಪ್ರಥಮ ಗಡಿನಾಡ ಜಾನಪದ ಸಮ್ಮೇಳನವನ್ನು 1999 ಡಿಸೆಂಬರ್ ಮಾಹೆಯಲ್ಲಿ 2 ದಿನಗಳಕಾಲ ಅದ್ದೂರಿಯಾಗಿ ನಡೆಸಲಾಯಿತು. ಇದು ಕರ್ನಾಟಕದಲ್ಲಿ ನಡೆದ ಅಪೂರ್ವ ಜಾನಪದ ಸಮ್ಮೇಳನವಾಗಿದ್ದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕಾಳೇಗೌಡ ನಾಗವಾರ ಸೇರಿದಂತೆ ಅಂದಿನ ಹಣಕಾಸು ಸಚಿವರ ಸಿದ್ದರಾಮಯ್ಯ, ಗ್ರಾಮೀಣ ಅಭಿವೃದ್ಧಿ ಸಚಿವ ಎಂ.ಪಿ.ಪ್ರಕಾಶ್, ಸಂಸ್ಕೃತಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಹಿರಿಯ ಚಲನ ಚಿತ್ರ ನಿರ್ದೇಶಕ ತರೂರು ಸಿದ್ದಲಿಂಗಯ್ಯ ಭಾಗವಹಿಸಿದ್ದರು. 2 ಸಾವಿರ ಕಲಾವಿದರು, ವಿವಿಧ ಪ್ರಕಾರದ ಕಲಾ ಪ್ರದರ್ಶನವನ್ನು 2 ರಾತ್ರಿ 2 ಹಗಲುಗಳ ಕಾಲ ನಿರಂತರವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ನನ್ನ ಮೊದಲ ಜಾನಪದ ಕೃತಿ 'ಚಿತ್ರದೇವರ ಕಾವ್ಯ' ಮತ್ತು 'ಹೊಳೆ ದಂಡೆ ಕರಿಕೆ' ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಹೀಗೆ ಆರಂಭವಾದ ಗಡಿನಾಡ ಜಾನಪದ ಕೇಂದ್ರ ದಿನದಿಂದ ದಿನಕ್ಕೆ ಜಾನಪದೀ ಸಂಬಂಧದ ಕೆಲಸವನ್ನು ತನ್ನ ಹಿತಿ-ಮಿತಿಗಳ ನಡುವೆ ನಿರಂತರವಾಗಿಸುತ್ತಾ ಬಂದಿತು. ಪ್ರಕಟಣೆ, ಕಲಾವಿದರ ಸಂಘಟನೆ, ಕಲಾವಿದರನ್ನು ಸರಕಾರದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿಯಲ್ಲಿ ವಿವಿಧ ರಾಜ್ಯಗಳಿಗೆ ಕರೆದೊಯ್ಯುವುದು ಈ ಮೂಲಕ ತುಮಕೂರು ಪರಿಸರದ ಜಾನಪದ ಸಂಸ್ಕೃತಿಯನ್ನು ವಿಶೇಷವಾಗಿ ಬುಡಕಟ್ಟು ಕಲೆಗಳಾದ ಗಣೇ ಕಲೆ, ಗೊರವರ ಕಲೆ, ಸೋಮನ ಕುಣಿತ ಈ ಕಲಾವಿದರನ್ನು ದೆಹಲಿ, ಮಥುರ, ಪಂಜಾಬ್, ಬಾಂಬೆ, ಚನ್ನೈ, ಕೊಟ್ಟಾಯಂ, ಆಂಧ್ರ ಈ ಪ್ರದೇಶಗಳ ಜಾನಪದ ಸಂಶೋಧಕರಿಗೆ ಇಲ್ಲಿನ ಕಲೆಯನ್ನು ಪ್ರಾತ್ಯಕ್ಷಿಕೆಯಾಗಿ ಪರಿಚಯಿಸಿದ್ದು ಈ ಜಾನಪದ ಕೇಂದ್ರದ ಅಭಿಮಾನದ ಸಂಗತಿಯಾಗಿದೆ. ಮಾತ್ರವಲ್ಲ ಸಿರಾ ಹಾಗೂ ತುಮಕೂರು ಜಿಲ್ಲೆಯ 300 ಕ್ಕೂ ಹೆಚ್ಚು ಜನಪದ ಕಲಾವಿದರಿಗೆ ಮಾಸಿಕ ಒಂದುವರೆ ಸಾವಿರ ರೂಪಾಯಿಗಳ ಮಾಸಶಾನ ದೊರೆಯುವಂತೆ ಸಂಘಟಿಸಿದ್ದು ಈ ಕೇಂದ್ರದ ವಿಶೇಷವಾಗಿದೆ. ಈ ಮೂಲಕ ಈ ಕೇಂದ್ರದ ಸಂಪರ್ಕ ಹೊಂದಿರುವ ಬಹುತೇಕ ಆಸಕ್ತ ಜನಪದ ಕಲಾವಿದರಿಗೆ ಉಪಯೋಗವಾಗುವಂತೆ ನೋಡಿಕೊಳ್ಳಲಾಗಿದೆ. ಆ ಕೆಲಸ ನಿರಂತರವಾಗುತ್ತಿದೆ. ಈ ಕೇಂದ್ರದ ಮೂಲಕ ಈವರೆಗೆ 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದೆ. 2010 ರಲ್ಲಿ ಪ್ರಕಟಿಸಿದ 'ಬಂಡಿಬಂದಾವೂ ಬಾಳೆ ವನದಾಗೆ' ಕೃತಿಗೆ ಕರ್ನಾಟಕ ಸರಕಾರರ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ವರ್ಷದ ಶ್ರೇಷ್ಠ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಈ ಕೇಂದ್ರದ ಸಾಧನೆ ಮತ್ತು ಸಂಚಾಲಕನಾದ ನನಗೆ, ನನ್ನ ಬಗೆಗೆ ಒಂದು ಬಗೆಯ ಗೌರವ ಮತ್ತು ಕೆಲಸ ಬಗೆಗೆ ಆಸಕ್ತಿ ಮೂಡಲು ಮತ್ತೆ ಮತ್ತೆ ಒತ್ತಾಸೆಯಾಯಿತು.
2005 ರಿಂದ 2008 ರವರೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯನನ್ನಾಗಿ ಆಗಿನ ಧರ್ಮಸಿಂಗ್ ಸರಕಾರ ನೇಮಿಸಿ ಕಳುಹಿಸಿದ ಸುತ್ತೋಲೆ ನನಗೆ ತಲುಪಿದಾಗ ನಾನೂ ಊರಿನಲ್ಲಿ ಇಲ್ಲದಿದ್ದರೂ ವಿಷಯ ಮುಟ್ಟಿಸಿದ ನನ್ನ ಮಗಳು ಅಕ್ಷತಳಾ ಮಾತನ್ನು ನಾನು ನಂಬದಿದ್ದರೂ ಮರುದಿನ ಟಿ.ವಿ. ಮತ್ತು ಪತ್ರಿಕೆಗಳಲ್ಲಿ ಈ ಸುದ್ದಿ ದಿಟವಾದ್ದದ್ದು ನನಗಿನ್ನೂ ಆಶ್ಚರ್ಯ ತಂದಿತು. ಇದು ನಾನು ಪ್ರೀತಿಸಿದ ಜಾನಪದ ಸಂಸ್ಕೃತಿಯನ್ನ ರಾಜ್ಯಾದ್ಯಂತ ಅರಿಯುವ, ಕಾಣುವ, ಜೊತೆಗೆ ಕಲಾವಿದರೊಂದಿಗೆ ಬೆರೆಯುವ ಸಾಧ್ಯವಾದಷ್ಟು ಕಲಾವಿದರಿಗೆ ಸಹಾಯ ಮಾಡಲು ಅವಕಾಶವಾದದ್ದು ನನ್ನ ಜಾನಪದ ಬದುಕಿನ ಬಹುದೊಡ್ಡ ತಿರುವು ಎಂದು ನಾನು ನಂಬಿದ್ದೇನೆ. ಈ ಅವಧಿಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಯಕ್ಷಗಾನ ಭೀಷ್ಮ ಕೆರೆಮನೆ ಶಂಭು ಹೆಗ್ಗಡೆ ಅವರ ಸಹವಾಸ ನನಗೆ ಉತ್ತಮ ಪಾಠ ಕಲಿಸಿದೆ.
2013 ನೇ ಆಗಸ್ಟ್ 23 ರಿಂದ ಪ್ರತಿಷ್ಠಿತ ಕರ್ನಾಟಕ ಜಾನಪದ ಪರಿಷತ್, ಬೆಂಗಳೂರು ಇದರ ತುಮಕೂರು ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ನ ಜಿಲ್ಲಾಧ್ಯಕ್ಷರಾಗಿ ನನ್ನನನ್ನು ನೇಮಸಿ ಬರೆದ ಆದೇಶ ಪತ್ರ ನನಗೆ ಕೊಂಚ ಗಲಿಬಿಲಿ ತಂದರೂ ನನ್ನ ಜಾನಪದ ಸಂಬಂಧಿ ಕೆಲಸಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿದ್ದು ನನಗೆ ಒಂದು ಬಗೆಯ ಸಮಾಧನ ತಂದಿತು.
ಡಾ. ಚಿಕ್ಕಣ್ಣ ಯಣ್ಣೆಕಟ್ಟೆ
ಕನ್ನಡ ಸಹ ಪ್ರಾಧ್ಯಾಪಕ, ಪಿಎಚ್ಡಿ ಮಾರ್ಗದರ್ಶಕ
ಜಾನಪದ ಇಂದು ಎಲ್ಲರ ಕುತೂಹಲದ ಕ್ಷೇತ್ರ ಒಟ್ಟು ಮನುಕುಲದ ಜೀವನಾಡಿಯಾಗಿ ಅನುಭವಾಮೃತದ ಬುತ್ತಿಯಾಗಿ, ಹಾಡಾಗಿ, ಕತೆಯಾಗಿ, ಒಗಟು ಗಾದೆಗಳಾಗಿ ಕುಣಿತ ಕಲಾ ಪ್ರಕಾರವಾಗಿ ಪಂಡಿತ ಪಾಮರೆರೆಲ್ಲರ ಆಸಕ್ತಿಯ ವಸ್ತುವಾಗಿದೆ, ಜಾನಪದವೆಂದರೆ ಇಡೀ ಮಾನವ ಸಂಸ್ಕೃತಿಯ ಅಧ್ಯಯನ ಎಂಬ ವಿಶಾಲಾರ್ಥ ಪ್ರಾಪ್ತವಾಗಿದೆ.
ಜನಪದ ಕೆಲ, ಕಲಾವಿದರೊಂದಿಗೆ ಬೆರೆಯುವ, ಪ್ರಚಾರ, ಪ್ರದರ್ಶನಕ್ಕೆ ಅನುವು ಮಾಡುವ, ಈ ಮೂಲಕ ಜಾನಪದ ಅಧ್ಯಯನ, ಸಂಶೋಧನೆಗೆ ಸಹಕಾರಿಯಾಗಬಲ್ಲ ಆಶಯದ ಸಂಸ್ಥೆ, ಗಡಿನಾಡ ಜಾನಪದ ಸಂಪರ್ಕಾಭಿವೃದ್ದಿ ಕೇಂದ್ರ ಪ್ರತಿಷ್ಠಾನ 20ನೇ ಆಗಸ್ಟ್ 1998 ರಂದು ಈ ಸಂಸ್ಥೆಯನ್ನು, ಜನಪದ ಮಹಾಕಾವ್ಯ ಹಾಡುಗಾರ ಲಕ್ಕವ್ವನಹಳ್ಳಿ ಗೊಲ್ಲರಹಟ್ಟಿ ನಿಂಗಜ್ಜ ಉದ್ಟಾಟಿಸಿದರು. ಚಲನಚಿತ್ರ ಕಲಾವಿದ ಶ್ರೀ ಕರಿಬಸವಯ್ಯ ಜನಪದ ಕಲಾವೇಳಕ್ಕೆ ಚಾಲನೆ ನೀಡಿದರು. ಕರ್ನಾಟಕಾಂದ್ರ ಗಡಿನೆಲ ದ್ವಾರನಕುಂಟೆಯಲ್ಲಿ ಒಂದು ನೂರಕ್ಕೂ ಹೆಚ್ಚು ಕಲಾವಿದರು ಗಡಿಭಾಗದ ವೈವಿಧ್ಯಮಯ ಕಲಾ ಪ್ರಕಾರಗಳು ಪ್ರದರ್ಶನ ನೀಡಿದರು. ಅಲ್ಲಿಂದ ಇಲ್ಲಿಯತನಕ ಈ ಸಂಸ್ಥೆ ಒಂದು ಸಾವಿರಕ್ಕೂ ಹೆಚ್ಚು ಕಲಾಮೇಳಗಳನ್ನು ಸಂಘಟಿಸಿದೆ.1999 ರಲ್ಲಿ ಪ್ರಪ್ರಥಮ ಗಡಿನಾಡ ಜಾನಪದ ಕಲಾಮೇಳವನ್ನು ಅಂದಿನ ಕರ್ನಾಟಕ ಕಾರ್ಮಿಕ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸತ್ಯನಾರಾಯಣ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಸಲಾಯಿತು. 16-02-2-1999 ರಂದು ಅಂದಿನ ಕನರ್ಾಟಕ ಸಕರ್ಾರದ ಉಪಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಗಡಿನಾಡ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿದರು, ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದ ಈ ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಶಾಸಕ ಟಿ.ಬಿ.ಜಯಚಂದ್ರ ಸೇರಿದಂತೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ//ಕಾಳೇಗೌಡ ನಾಗವಾರ, ಐ.ಎಂ.ವಿಠಲ ಮೂರ್ತಿ, ಡಾ// ಎಜಾಸುದ್ದೀನ್, ಚಲನಚಿತ್ರ ಕಲಾವಿದರಾ ಪ್ರಮೀಳಾ ಜೋಷಾಯ್, ಶ್ರೀ ಸುಂದರರಾಜ್, ಡಾ// ಜಿ.ಪರಮೇಶ್ವರ ಮೊದಲಾದ ಗಣ್ಯರು ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಜಾನಪದ ಸಂಗೀತ ಸಂಜೆ, ಜಾನಪದ ಕಲಾ ಪ್ರದರ್ಶನ, ಗಡಿನಾಡ ಜಾನಪದ ಸಾಹಿತ್ಯ ಸಮೀಕ್ಷೆ, ಗಡಿನಾಡಿ ಜಾನಪದ ಸಂಗೀತೋತ್ಸವ, ಗಡಿನಾಡ ಕಲಾವಿದರ ಗೌರವಾರ್ಪಣೆ ಮೊದಲಾದ ಕಲಾ ಕಾರ್ಯಕ್ರಮದಲ್ಲಿ 1800 ಕಲಾವಿದರು ರಾಜ್ಯದ ನಾನಾ ಭಾಗಗಳಿಂದ ಭಾಗವಹಿಸಿದ್ದರು, ಅಂದಿನ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಎಂ.ಪಿ.ಪ್ರಕಾಶ್ ಸಮಾರೋಪ ಭಾಷಣ ಮಾಡಿದ ಈ ಸಭೆಯಲ್ಲಿ ಕನರ್ಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ// ಎಚ್.ಕೆ.ಲಕ್ಕಪ್ಪಗೌಡ, ದಲಿತ ಕವಿ ಡಾ// ಸಿದ್ದಲಿಂಗಯ್ಯ, ಚಲನಚಿತ್ರ ನಿದರ್ೇಶಕ ತರೂರು ಸಿದ್ದಲಿಂಗಯ್ಯ, ಚಿಂತಕ ಜಾಣಗೆರೆ ವೆಂಕಟರಾಮಯ್ಯ, ಚಲನಚಿತ್ರ ಕಲಾವಿದರಾದ ಶ್ರೀ ಕರಿಬಸವಯ್ಯ ವಾಣಿ ಶ್ರೀ ಭಾಗವಹಿಸಿದ್ದರು, ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಗಡಿನಾಡ ಜಾನಪದ ಸಂಪಕರ್ಾಧ್ಯಯನ ಕೇಂದ್ರ ಪ್ರತಿಷ್ಠಾನ ಕಳೆದ ಹತ್ತು ವರ್ಷಗಳಿಂದ ಗಡಿಭಾಗದ ಕಲಾವಿದರಿಗೆ ಒತ್ತಾಸೆಯಾಗಿ ಬೆಳೆದಿದೆ. ಹಲವು ಕಲಾಮೇಳಗಳ ಮೂಲಕ, ಕಲಾವಿದರ ಅದಮ್ಯ ಉತ್ಸಾಹವನ್ನು, ಕಲಾ ಹಿರಿಮೆಯನ್ನು ಗುರುತಿಸಿದೆ. ತೆರೆಯ ಮರೆಯ ಕಲಾವಿದರಿಗೆ ಪ್ರದರ್ಶನೆ, ಪ್ರಸಾರಕ್ಕೆ ಆಸ್ಪದ ನೀಡಿದೆ. ಕನರ್ಾಟಕ ಸಕರ್ಾರದ ಸಾಂಸ್ಕ್ರತಿಕ ವಿನಿಮಯ ಮೊದಲಾದ ಯೋಜನೆಗಳಲ್ಲಿ ಬಾಂಬೆ, ಹೆಹಲಿ, ಹೈದರಾಬಾದ್ ಮುಂತಾದ ಹೊರ ರಾಜ್ಯಗಳಲ್ಲೂ ಕಲಾಪ್ರದರ್ಶನಕ್ಕೆ ಅವಕಾಶ ಒದಗಿಸಿದೆ. ಅರ್ಹ, ಹಿರಿಯ ಕಲಾವಿದರಿಗೆ ಮಾಸಾಶನದಂತಹ ಮಹತ್ವದ ಯೋಜನೆಗೆ ಒಳಪಡಿಸಿದೆ. ಆಕಾಶವಾಣಿ, ದೂರದರ್ಶನಗಳ ಮೂಲಕವೂ ಕಲಾ ಪ್ರದರ್ಶನಕ್ಕೆ ಅವಕಾಶ ಒದಗಿಸಿದೆ.ಈ ಬಗೆಯ ಅಪೂರ್ವ ಕಲಾವಿದರು ಈ ಭಾಗದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ.
Home | About Us | Frontier Folk | Book World | Junjappa Comprehensive Myth | Gallery | Broadcast - Show | Media Information | Honor - Reception | Our Team
Copyright © 2015 gadinadajaanapada.com all rights reserved
Designed & Developed by Digissofts Technologies